ನನ್ನ ಗೆಳೆಯರಾದ ಥೇಮಿ ಅವರೊಳಗೆ ಒಬ್ಬ ಲೇಖಕನಿದ್ದಾನೆ ಎಂಬುದು ನನಗೆ ಹಲವು ವರುಷಗಳಿಂದ ತಿಳಿದಿತ್ತು. ನಮ್ಮ ಸಂಸ್ಥೆಯಿಂದ ತಯಾರಿಸುತ್ತಿದ್ದ ಹಲವು ಟೆಲಿಫಿಲ್ಮ್ಗಳಿಗೆ, ಕಿರುಚಿತ್ರಗಳಿಗೆ ಅವರನ್ನು ಚರ್ಚೆಗಳಲ್ಲಿ, ಕಥಾವಿಸ್ತರಣೆಯಲ್ಲಿ ಬಳಸಿಕೊಂಡದ್ದಿದೆ. ವೃತ್ತಿಯಿಂದ ಪತ್ತೇದಾರರೇ ಆದ ಅವರ ಅನುಭವ ಲೋಕವೂ ದೊಡ್ಡದು. ಅವರ ಓದಿನ ಹರಹೂ ವಿಸ್ತಾರವಾದದ್ದು. ಹೀಗಾಗಿ ಅವರು ಕಾದಂಬರಿ ಬರೆದಿದ್ದಾರೆ ಎಂದಾಗ ಅತ್ಯಂತ ಕುತೂಹಲದಿಂದ ಓದಿದೆ. ನನಗಿಷ್ಟವಾಯಿತು.
* ಅವರ ಭಾಷೆಯ ಬಳಕೆಯಲ್ಲಿ ಅನುಭವಸ್ಥ ಲೇಖಕರ ಹದವನ್ನು ಕಂಡುಕೊಂಡಿದ್ದಾರೆ. ನಿರೂಪಣೆಯಲ್ಲಿ ಹಲವು ತಿರುವುಗಳನ್ನು ಸೃಷ್ಟಿಸುತ್ತಾ ಓದುಗನನ್ನು ಕತೆಯ ಲೋಕದೊಳಗೆ ಉಳಿಸಿಕೊಳ್ಳುವ ಕಥನ ತಂತ್ರವನ್ನೂ ಕಲಿತಿದ್ದಾರೆ. ಕಾದಂಬರಿ ಬೆಳೆಯುತ್ತಾ ಬೆಳೆಯುತ್ತಾ ನೋಡುಗನೆದುರು ಚಿತ್ರವಾಗುವಂತೆ ಕತೆಯನ್ನು ನಿರೂಪಿಸುವ ಶಕ್ತಿಯೂ ಅವರಿಗೆ ಒಲಿದಿದೆ.*
ಈ ಎಲ್ಲಾ ಕಾರಣಗಳಿಗಾಗಿ ನಿಮ್ಮ ಕೈಯಲ್ಲಿ ಈಗಿರುವ "ದ್ರೌಣಿ" ಕಾದಂಬರಿಯು ಒಂದೊಳ್ಳೆಯ ಓದು ಮತ್ತು ನಿಮಗೂ ಗೊತ್ತಿಲ್ಲದ ಅನುಭವಲೋಕವನ್ನು ನಿಮ್ಮೆದುರು ತೆರೆದಿಡುತ್ತದೆ. ಪುರಾಣದ ಹಲವು ವಿವರಗಳ ಜೊತೆಗೆ ಸಮಕಾಲೀನ ಬದುಕನ್ನು ಸಮಾನವಾಗಿರಿಸಿ ಕಥನ ಬಿಚ್ಚಿಡುವ ಈ ಕ್ರಮ ಪ್ರತಿ ಓದುಗರನ್ನೂ ಒಳಗೊಳ್ಳುತ್ತದೆ ಹಾಗೂ ಮತ್ತೆ ಮತ್ತೆ ಮಿರಾಂಡ ಅವರ ಹೊಸ ಬರಹಗಳನ್ನು ಓದಲು ಪ್ರೇರೇಪಿಸುತ್ತದೆ ಎಂದು ಭಾವಿಸಿದ್ದೇನೆ.
ಥೇಮಿ ಅವರು ತಮ್ಮ ಮೊದಲ ಕಾದಂಬರಿಯ ಅನುಭವದ ಹಿನ್ನೆಲೆಯಲ್ಲಿ ಮತ್ತಷ್ಟು ಈ ಬಗೆಯ ಹೊಸ ಲೋಕವನ್ನು ಕನ್ನಡ ಓದುಗರಿಗೆ ಪರಿಚಯಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
- ಬಿ. ಸುರೇಶ
(ರಂಗಕರ್ಮಿ, ನಾಟಕಕಾರ/ಚಲನಚಿತ್ರ ನಿರ್ಮಾಪಕ-ನಿರ್ದೇಶಕ-ಕಲಾವಿದ)
Related Products
ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ
ಇಲ್ಲೇ ಎಲ್ಲೋ ಅಪ್ಪ ಕರೆದಂತಿದೆ ಎನ್ನುವುದು ಕನ್ನಡದ ಹೊಸ ಅನುಭವ ಕಥನದ ಹೆಸರು. ಈ ಪುಸ್ತಕವನ್ನು ವಿನಾಯಕ ಅರಳಸುರಳಿ..
ಗಾಳಿ ಗೂಡು
ಪ್ರತಿ ದಿನ ರಾತ್ರಿಯಾಗುವುದನ್ನು ಕಾಯುವುದೇ ವಿಳಂಬನ ಬದುಕಿನ ಅತ್ಯಂತ ಆಸಕ್ತಿದಾಯಕ ಕೆಲಸವಾಗಿತ್ತು. ಒಂದೊಂದು ದಿನ ಮಾತ್ರ..
ಟಚ್ ಮೀ ನಾಟ್
ನಜರಿಗೆ ಸಿಕ್ಕ ಕಥೆಗಳು ಮುನವ್ವರ್ ಅವರ ಕಥೆಗಳು ಬದುಕೆನ್ನುವ ಬೃಹತ್ ರಚನೆಯ ಪುಟ್ಟ ಮಿನಿಯೇಚರ್ ಮಾದರಿಯಂತೆ ಭಾಸವಾಗುತ್ತ..
ತೊಂಡೆ ಚಪ್ಪರ
'ಚಂದ ಚಂದ ನನ್ ಹೆಂಡ್ತಿ' ಎಂದು ಚಂದವಾಗಿ ಚಂದನವನಕ್ಕೆ ಕಾಲಿಟ್ಟವರು ಪ್ರಮೋದ್ ಮರವಂತೆ. ಕಾಂತಾರ ಚಿತ್ರದ 'ಸಿಂಗಾರ ಸಿ..
ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ
ತೀರಾ ಹತ್ತಿರವಾದವರೇ ತುಂಬಾ ನೋವು ಕೊಡುವುದು' ಎನ್ನುವುದು ಅವನು ಮರೆಯಲು ಹೇಗೆ ಸಾಧ್ಯ? 'ಇಟ್ಸ್ ಇಂಪಾಸಿಬಲ್' ಎಂದು ಅ..
ಲಾಧಾಕ್ಲಿಷ್ಣ ಮತ್ತು ಇಂದಿಲಾ ಕ್ಯಾಂಟೀನು
ಚೈನು ಎಳೆದದ್ದು ನಾನೇ...! ಕಲ್ಲಿನ ಗುಡಿಯಲ್ಲಿರುವವನಿಗೆ ಕೇಳಿಸುತ್ತದೆ, ಕಾಣಿಸುತ್ತದೆ ಅಂದುಕೊಳ್ಳುತ್ತೀರಾದರೆ ಕಬ್ಬಿಣದ..




-300x452.webp)


